ಕುಲ್ನ ಲಿಂಡನ್ ಥಾಲ್	

	ಪಶ್ಚಿಮ ಜರ್ಮನಿಯ ಕೊಲೋನ್ ಬಳಿಯಿರುವ ಒಂದು ಸ್ಥಳ. ಮಧ್ಯ ಯೂರೋಪಿನ ನೂತನ ಶಿಲಾಯುಗಕ್ಕೆ ಸೇರಿದ ಡ್ಯಾನ್ಯೂಬ್ - ಮೊದಲನೆಯ ಹಂತದ ಸಂಸ್ಕøತಿಯ ಮಾಹಿತಿಗಳನ್ನು ಈ ನೆಲೆಯಲ್ಲಿ ಅಗೆದು ತೆಗೆದಿದ್ದಾರೆ. ಇಲ್ಲಿ ಕ್ರಿ. ಪೂ. 2,700 ರಿಂದ 400-500 ವರ್ಷ ಕಾಲ ಹಲವಾರು ತಲೆಮಾರುಗಳ ಜನ ಜೀವಿಸಿದ್ದರು. ಈ ದೀರ್ಘಕಾಲದ ಮೊದಲ ಭಾಗದಲ್ಲಿ ವಾಸಕ್ಕೆ ಸಾಮಾನ್ಯ ಗುಡಿಸಲುಗಳನ್ನೂ ಧಾನ್ಯ ಶೇಖರಣೆಗೆ ಮತ್ತು ಧಾನ್ಯವನ್ನು ಜೌಗಿನಿಂದ ರಕ್ಷಿಸಲು ಎತ್ತರವಾದ ಮರದ ದಿಮ್ಮಿಗಳ ಮೇಲೆ ಕಣಜಗಳನ್ನೂ ನಿರ್ವಿಸಿಕೊಂಡಿದ್ದರು. ಅನಂತg 'ಸ್ಟ್ರೋಕ್ ' ಅಲಂಕಾರ ಹೊಂದಿದ ಮಡಕೆಗಳನ್ನು ಪ್ರಯೋಗಿಸುತ್ತಿದ್ದ ಜನ ವಿವಿಧ ಮಾರ್ಗಗಳ ಸಂಗಮಸ್ಥಾನದಲ್ಲಿದ್ದ ಈ ನೆಲೆಯನ್ನು ಆಕ್ರಮಿಸಿ ಸ್ವಲ್ಪಕಾಲಾನಂತರ ಇದನ್ನು ತ್ಯಜಿಸಿದರು. ಮತ್ತೆ ಈ ಜನ ನಿರ್ಮಿಸಿಕೊಂಡಿದ್ದ ಗ್ರಾಮ ಬೆಂಕಿಯ ಆಕಸ್ಮಿಕದಿಂದ ನಾಶವಾಯಿತು. ಹಿಂದಿನವೆಲ್ಲಕ್ಕಿಂತ ದೊಡ್ಡದಾದ, 200-300 ಜನ ವಾಸಿಸುವ 30-35 ಮನೆಗಳುಳ್ಳ, ಕಂದಕ ಮತ್ತು ಬೇಲಿಗಳಿಂದ ರಕ್ಷಿತವಾದ ಗ್ರಾಮವೊಂದು ಕೊನೆಯದಾಗಿ ನಿರ್ಮಿತವಾಯಿತು. ಕಣಜಗಳು 100 ಅಡಿಗಳಷ್ಟು ಉದ್ದವಾಗಿದ್ದುವು. ಇವು ಸಾಕಷ್ಟು ಗಾಳಿ ಬೆಳೆಕು ಬರುವಂತೆ ನಿರ್ಮಿತವಾಗಿದ್ದುವಲ್ಲದೆ ತೇವ ಹತ್ತದಂತೆ ರಕ್ಷಿತವಾಗಿದ್ದುವು. ಧಾನ್ಯಗಳನ್ನು ಒಣಗಿಸಲು ಒಂದು ಅಟ್ಟವೂ ಇತ್ತು. ಮೊದಮೊದಲು ಈ ಜನ ಕಲ್ಲಿನ ಗುದ್ದಲಿಗಳಿಂದ ನೆಲವನ್ನು ಅಗೆದು ಬೇಸಾಯ ಮಾಡುತ್ತಿದ್ದರು. ಕ್ರಮೇಣ ನೇಗಿಲಿನ ಉಪಯೋಗ ಬಳಕೆಗೆ ಬಂದಂತೆ ಕಾಣುತ್ತದೆ. ಕಲ್ಲಿನ ಕುಡುಗೋಲುಗಳನ್ನೂ ಜೀನಿನಾಕಾರದ ಬೀಸುವ ಕಲ್ಲುಗಳನ್ನೂ ಉಪಯೋಗಿಸುತ್ತಿದ್ದರು. ಕುಟುಂಬಪ್ರಧಾನವಾದ ಈ ಸಮಾಜದಲ್ಲಿ ಪಂಗಡಗಳಿಗೆ ನಾಯಕನಿರುತ್ತಿದ್ದ. ಈ ಜನ ದೂರ ಪ್ರದೇಶಗಳೂಡನೆ ವ್ಯಾಪಾರ ನಡೆಸುತ್ತಿದ್ದರು.
(ಬಿ.ಕೆ.ಜಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ